SSLC Result : ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ

SSLC Result : ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 2026ರ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ, ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿಯೇ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶವನ್ನು ಪ್ರಕಟಿಸುತ್ತಿದೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ. ಹೈಕೋರ್ಟ್‌ ಆದೇಶ ಪಾಲಿಸುತ್ತೇವೆ. ಹಿಂದಿಗೆ ಅಂಕಗಳನ್ನು ನೀಡಲಾಗವುದು. ಗುರುವಾರ ಸುದ್ದಿಗೋಷ್ಟಿ ಬಳಿಕ ಫಲಿತಾಂಶ ಇಲಾಖೆಯ ಅಧಿಕೃತ ಜಾಲತಾಣ (KSEAB) ಅಲ್ಲಿ ಬಿಡುಗಡೆ ಮಾಡಲಾಗುವುದು.

Sslc ರಿಸಲ್ಟ್ ಚೆಕ್ ಮಾಡುವ ಲಿಂಕ್

SSLC Result

ಈ ವರ್ಷ ತೃತೀಯ ಭಾಷೆ ಹಿಂದಿಗೆ ಗ್ರೇಡ್‌ ಬದಲಿಗೆ ಅಂಕಗಳನ್ನೂ ನೀಡುವಂತೆ ಹೈಕೋರ್ಟ್‌ ಆದೇಶವನ್ನು ಪಾಲಿಸಲಾಗುವುದು. ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದರು. ಈ ಮೂಲಕ ಮುಂದಿನ ವರ್ಷದಿಂದ ಹಿಂದಿಗೆ ಗ್ರೇಡ್‌ ನೀಡುವ ಪದ್ದತಿ ಜಾರಿಗೊಳಿಸುವ ಕುರಿತು ಸಚಿವರು ಸುಳಿವು ನೀಡಿದ್ದಾರೆ.

ಗುರುವಾರ ಬಿಡುಗಡೆಯಾಗುವ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್‌ ತಾಣವಾದ kseab.karnataka.gov.in, karresults.nic.in ನಲ್ಲಿ ನೋಡಬಹುದು. ಹಾಗೆಯೇ ಸರ್ವರ್‌ ಮತ್ತು ತಾಂತ್ರಿಕ ಸಮಸ್ಯೆಗಳಿಲ್ಲದೆ ಡಿಜಿಲಾಕರ್‌ ನಲ್ಲೂ ನೋಡಬಹುದು. ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆ (Registration number) ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ.

ಈ ಬಾರಿ ರಾಜ್ಯಾದ್ಯಂತ ಅತ್ಯಂತ ಸುಗಮವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮೌಲ್ಯಮಾಪನ ಪ್ರಕ್ರಿಯೆಯೂ ತ್ವರಿತಗತಿಯಲ್ಲಿ ಪೂರ್ಣಗೊಂಡಿರುವುದರಿಂದ ನಿಗದಿತ ಸಮಯಕ್ಕೂ ಮುನ್ನವೇ ಬೋರ್ಡ್ ಫಲಿತಾಂಶವನ್ನು ಹೊರತರುತ್ತಿದೆ. ಮುಂದಿನ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ ಈ ಪ್ರಮುಖ ಘಟ್ಟದಲ್ಲಿ, ವಿದ್ಯಾರ್ಥಿಗಳು ಯಾವುದೇ ಆತಂಕ ಅಥವಾ ಒತ್ತಡಕ್ಕೆ ಒಳಗಾಗದೆ, ತಮ್ಮ ಅಂಕಗಳನ್ನು ಧೈರ್ಯದಿಂದ ಹಾಗೂ ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

Leave a Comment