SSLC RESULT 2026 : ಫಲಿತಾಂಶ ಬಿಡುಗಡೆ ಅಪ್ಡೇಟ್; ಅಂಕಪಟ್ಟಿ ಡೌನ್‌ಲೋಡ್ ಮಾಡೋದು ಹೇಗೆ, ಇಲ್ಲಿದೆ ವಿವರ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC Results 2026) ಪರೀಕ್ಷೆಯ ಫಲಿತಾಂಶದ ಮೇಲೆ ಅಪಾರ ನಿರೀಕ್ಷೆಗಳು ಸೃಷ್ಟಿಯಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಶೀಘ್ರದಲ್ಲೇ 10ನೇ ತರಗತಿ ಬೋರ್ಡ್ ಪರೀಕ್ಷೆ 2026 ಫಲಿತಾಂಶ ಬಿಡುಗಡೆ ಮಾಡಲಿದೆ. ಈ ಮೊದಲು ಏಪ್ರಿಲ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಈ ವಾರ ಫಲಿತಾಂಶ ಬಿಡುಗಡೆ ದಿನಾಂಕ ಸಹ ಘೋಷಣೆ ಆಗುವ ಸಾಧ್ಯತೆ ಇದೆ. ಈ ಫಲಿತಾಂಶ ಯಾವೆಲ್ಲ ವೇದಿಕೆಗಳಲ್ಲಿ ಲಭ್ಯವಿದೆ. ಡೌನ್‌ಲೋಡ್ ಮಾಡುವುದು ಹೇಗೆ?, ಅಧಿಕೃತ ಲಿಂಕ್ ಮಾಹಿತಿ ಇಲ್ಲಿದೆ.
2026 ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿವೆ. ಅಲ್ಲಿಂದ ಈ ವರೆಗೆ ಪೋಷಕರು ಮತ್ತು ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಶೀಘ್ರವೇ ಫಲಿತಾಂಶ ಪ್ರಕಟವಾಗಲಿದೆ. ನೀವು ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ವೀಕ್ಷಿಸಬಹುದು/ಡೌನ್‌ಲೋಡ್ ಮಾಡಿಕೊಳ್ಳಬಹುದು.
ಫಲಿತಾಂಶಕ್ಕಾಗಿ ಕಾಯುತ್ತಿರುವ 9.02 ಲಕ್ಷ ಮಕ್ಕಳು
ರಾಜ್ಯದಲ್ಲಿ ಈ ಭಾರಿ10 ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು 9.02 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಸುಮಾರು ಎರಡು ಸಾವಿರದಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷೆ ಬರೆದ ಅವರೆಲ್ಲರು ಮುಂದಿನ ಭವಿಷ್ಯದ ಬಗ್ಗೆ ಆಲೋಚನೆಯಲ್ಲಿ ತೊಡಗಿದ್ದಾರೆ. ಎಸ್‌ಎಸ್‌ಎಲ್‌ಸಿ ಶಿಕ್ಷಣ ಹಂತದಲ್ಲಿ ಮಹತ್ವದ ಘಟ್ಟವಾಗಿರುತ್ತದೆ. ಇಲ್ಲಿನ ಪಡೆಯುವ ಅಂಕಗಳು ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯ ಆಯ್ಕೆಗೆ ಪೂರಕವಾಗಿರುತ್ತದೆ. ಆದ್ದರಿಂದ ಪರೀಕ್ಷೆ ಬರೆದ ಲಕ್ಷಾಂತರ ಮಕ್ಕಳು ಫಲಿತಾಂಶ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿದ್ದಾರೆ.
ಹಿಂದಿಗೆ ಗ್ರೇಡ್ ಅಥವಾ ಅಂಕ? ಗೊಂದಲ ಇತ್ಯರ್ಥ
SSCL ಪರೀಕ್ಷೆ ಮುಗಿದ ಬಳಿಕ ರಾಜ್ಯ ಶಿಕ್ಷಣ ಇಲಾಖೆ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ್ಗ್ರೇಗ್ರೇಡ್ ನೀಡುವ ಪದ್ಧತಿ ಜಾರಿಗೆ ತರಲು ನಿರ್ಧರಿಸಿ ಪ್ರಕಟಿಸಿತ್ತು. ಇದು ಮೌಲ್ಯಮಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲು ಕಾರಣವಾಯಿತು. ಈ ವಿಚಾರ ಸದ್ಯ ಕೋರ್ಟ್‌ನಲ್ಲಿ ಮಂಗಳವಾರ (ಏಪ್ರಿಲ್ 21) ರಂದು ಇತ್ಯರ್ಥವಾಗಿದೆ.

ಎಸ್‌ಎಸ್‌ಎಲ್‌ಸಿ ಅಧಿಸೂಚನೆಯಲ್ಲಿ ಮಾಹಿತಿ ನೀಡದೇ ಪರೀಕ್ಷೆ ಪೂರ್ಣವಾದ ಬಳಿಕ ಸರ್ಕಾರ ದಿಢೀರ್ ಗ್ರೇಡ್ ನಿರ್ಧಾರ ಕೈಗೊಂಡಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಬಳಿಕ ಸರ್ಕಾರದ ಅರ್ಜಿ ವಜಾ ಮಾಡಿ ಹಿಂದಿಗೆ ಗ್ರೇಡ್ ಬದಲಾಗಿ ಅಂಕಗಳನ್ನು ಪರಿಗಣಿಸುವಂತೆ ಆದೇಶಿಸಿತು. ಹೈಕೋರ್ಟ್ ಮೆಟ್ಟಿಲೇರಿದ್ದರಿಂದಲೂ ಫಲಿತಾಂಶ ಬಿಡುಗಡೆ ಕೊಂಚ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.
SSLC ಫಲಿತಾಂಶ 2026 ಡೌನ್‌ಲೋಡ್ ಮಾಡೋದು ಹೇಗೆ?
ಇನ್ನೇನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಂಡಳಿ (KSEAB) ಶೀಘ್ರವೇ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ 2026 ಬಿಡುಗಡೆ ಮಾಡಲಿದೆ. ಪ್ರಕಟವಾದ ಬಳಿಕ ವಿದ್ಯಾರ್ಥಿಗಳು/ಪೋಷಕರು ಈ ವಿಧಾನಗಳನ್ನು ಅನಸುರಿಸಿ ನೀವು ಅಂಕಪಟ್ಟಿ/ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡಿಜಿಲಾಕರ್, ಕರ್ನಾಟಕ ಒನ್ ಅಪ್ಲಿಕೇಷನ್‌ಗಳಲ್ಲೂ ರಿಸಲ್ಟ್ ನೋಡಲು ಅವಕಾಶ ಕಲ್ಪಿಸಲಾಗಿದೆ.
ಅಂಕಪಟ್ಟಿ ಡೌನ್‌ಲೋಡ್‌ಗೆ ಈ ವಿಧಾನ ಅನುಸರಿಸಿ
1. ಮೊದಲು ಕೆಎಸ್‌ಇಅಬಿ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ಕೊಡಿ
2. ಜಾಲತಾಣದ ಪರದೆ ಮೇಲೆ ಕಾಣವು SSLC Result 2026 ಆಯ್ಕೆ ಮೇಲೆ ಕ್ಲಿಕ್ ಮಾಡಿ
3. ಬಳಿಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನಮೂದಿಸಿ
4. ವಿವರ ಹಾಕಿದ ಬಳಿಕ ಸಲ್ಲಿಸು/ಸಬ್ಮಿಟ್ ಬಟನ್ ಒತ್ತಿ
5. ಪರದೆ ಮೇಲೆ SSLC 2026 ಅಂಕಪಟ್ಟಿ ಕಾಣಿಸುತ್ತದೆ
6. ಒಂದೊಮ್ಮೆ ಅದು ನಿಮ್ಮದೇ ಅಂಕಪಟ್ಟಿಯೇ ಎಂದು ಪರಿಶೀಲಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದು.
7. ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್‌ನಲ್ಲೂ ಸಹ KSEAB 10 ನೇ ತರಗತಿ ಅಂಕಪಟ್ಟಿ 2026
ದೊರೆಯಲಿದೆ. ಆಪ್‌ಗಳನ್ನು ಪ್ಲೆಸ್ಟೋರ್‍ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ ನೀವು
ಅಲ್ಲಿ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.