PM awas yojane arji : ಸರ್ಕಾರದಿಂದ ಉಚಿತ ಮನೆಗಳ ಹಂಚಿಕೆ, ಬೇಗ ಅರ್ಜಿ ಹಾಕಿದವರಿಗೆ ಅವಕಾಶ!

PM awas yojane arji : ಸರ್ಕಾರದಿಂದ ಉಚಿತ ಮನೆಗಳ ಹಂಚಿಕೆ, ಬೇಗ ಅರ್ಜಿ ಹಾಕಿದವರಿಗೆ ಅವಕಾಶ!

PM awas yojana : ನಮಸ್ಕಾರ ಸ್ನೇಹಿತರೆ, ಕರ್ನಾಟಕ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮ್ಮೆಲ್ಲರಿಗೂ ಸ್ವಾಗತ. ಸ್ನೇಹಿತರ ನೀವೆನಾದರೂ ಮನೆ ಕಟ್ಟಬೇಕು ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಹಣದ ಕೊರತೆ ಆಗಿದೆಯಾ? ಹಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಲೇಖನದಲ್ಲಿ ನೀಡಿರುವ ಯೋಜನೆಗೆ ಅರ್ಜಿ ಹಾಕಿ ಮನೆ ಕಟ್ಟಲು ಸರ್ಕಾರದಿಂದ ಸಬ್ಸಿಡಿ ಹಣವನ್ನು ಪಡೆಯಬಹುದು. ಕೇಂದ್ರ ಸರ್ಕಾರ ವು ವಸತಿ ಇಲ್ಲದ ಬಡ ಕುಟುಂಬಗಳಿಗೆ ಈ ಯೋಜನೆಯ ಮೂಲಕ ಉಚಿತ ಮನೆಯನ್ನು ನಿರ್ಮಾಣ ಮತ್ತು ಮನೆ ಕಟ್ಟಲು ಸಬ್ಸಿಡಿ ಹಣವನ್ನು ನೀಡುತ್ತಿದೆ. ಇದು ಯಾವ ಯೋಜನೆ, ಇದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಇತ್ತೀಚಿಗೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ದೇಶದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತೇವೆ. ಈ ಯೋಜನೆಗಳಿಂದ ದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಏಳಿಗೆಯನ್ನು ಮಾಡಲು ಸಾಧ್ಯವಾಗುತ್ತಿದೆ. ಅದರಂತೆ ಈ ಯೋಜನೆಯು ಒಂದಾಗಿದೆ, ಈ ಯೋಜನೆಯ ಮೂಲಕ ದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ವಸತಿಗಳಿಲ್ಲದ ಬಡ ಕುಟುಂಬಗಳಿಗೆ ಸರ್ಕಾರವು ಮನೆ ನಿರ್ಮಾಣ ಮಾಡಲು ಧನ ಸಹಾಯವನ್ನು ನೀಡುತ್ತದೆ. ಈ ಯೋಜನೆಗೆ ಸಂಬಂಧಪಟ್ಟ ಕೆಲವು ಪ್ರಮುಖ ವಿವರಗಳನ್ನು ಈ ಲೇಖನವೂ ನಿಮಗೆ ಒಂದೊಂದಾಗಿ ತಿಳಿಸಿರುತ್ತದೆ. ಆದ್ದರಿಂದ ಈ ಲೇಖನವನ್ನು ಮುಗಿಯುವವರೆಗೂ ತಪ್ಪದೆ ಓದಿ. ನಂತರ ಈ ಯೋಜನೆಯಲ್ಲಿ ನಿಮಗೆ ಅರ್ಜಿ ಹಾಕಬೇಕು ಎಂದು ಇಚ್ಛಿಸಿದರೆ, ಹೇಗೆ ಅರ್ಜಿ ಹಾಕಬೇಕು ಎನ್ನುವ ಮಾಹಿತಿಯನ್ನು ಕೂಡ ಕೆಳಗೆ ನೀಡಲಾಗಿದೆ. ಅದನ್ನು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಿ.

ನಮಗೆ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಹಲವು ಬಡ ಕುಟುಂಬಗಳು ವಸತಿ (ಸ್ವಂತ ಮನೆಗಳಿಲ್ಲದೇ) ಇಲ್ಲದೆ ಹಲವು ಕುಟುಂಬಗಳಿವೆ ಅಂತಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ, ಅಂತಹ ಬಡ ಕುಟುಂಬಗಳಿಗೆ ವಸತಿ ನಿರ್ಮಾಣ ಮಾಡಲು ಆರ್ಥಿಕ ಸಹಾಯವನ್ನು ನೀಡಬೇಕು ಎನ್ನುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ನೀವೇನಾದರೂ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ಸೇರಿದ ವರ್ಗದವರಾಗಿದ್ದರು ತಪ್ಪದೆ ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಮೂಲಕ ವಸತಿ ನಿರ್ಮಾಣ ಮಾಡಿಕೊಳ್ಳಿ. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ನಮ್ಮ ಈ ಮಾಧ್ಯಮದಲ್ಲಿ ಸರ್ಕಾರದ ಹಲವು ಜನರಿಗೆ ಉಪಯೋಗವಾಗುವ ಯೋಜನೆಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತಿದ್ದು, ನೀವು ಕೂಡ ಈ ಯೋಜನೆಗಳ ಮಾಹಿತಿ ಪಡೆದುಕೊಂಡು ಯೋಜನೆಯ ಲಾಭ ಪಡೆಯಲು ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ. ನಾವು ಪ್ರತಿದಿನ ಇದೇ ರೀತಿಯ ಸರ್ಕಾರಿ ಯೋಜನೆಗಳ ನಮ್ಮ ಮಾಧ್ಯಮದಲ್ಲಿ ನಿಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ನಮ್ಮ ಮಾಧ್ಯಮದಲ್ಲಿ ನೀಡುವ ಮಾಹಿತಿ ನಿಮಗೆ ಬಹಳ ಸಹಕಾರಿಯಾಗಿರುತ್ತದೆ.

ಈ ಶ್ರಮ ಕಾರ್ಡ್ ಮೂಲಕ ಪ್ರತಿ ತಿಂಗಳು ₹3000 ಪಿಂಚಣಿ ಪಡೆಯಿರಿ.

ನಮ್ಮ ಮಾಧ್ಯಮದಲ್ಲಿ ಸರ್ಕಾರದ ಹಲವು ಪ್ರಮುಖ ಜನಪರ ಯೋಜನೆಗಳ ಜೊತೆಗೆ ರೈತರಿಗೆ ಸರ್ಕಾರ ನೀಡುವ ಉಪಕರಣಗಳ ಮೇಲಿನ ಸಬ್ಸಿಡಿ, ರೈತರಿಗೆ ನೀಡುವ ಬೆಳೆ ಪರಿಹಾರ, ಬೆಳೆ ವಿಮೆ ಮತ್ತು ಸಾಲ ಮನ್ನಾ ಯೋಜನೆಗಳ ಸಂಪೂರ್ಣ ಮಾಹಿತಿ, ಜನರು ಗ್ರಾಮ ಪಂಚಾಯತಿಯಲ್ಲಿ ಪಡೆಯಬಹುದಾದ ಕೆಲವು ಯೋಜನೆಗಳ ಮಾಹಿತಿ, ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭವಾಗುತ್ತದೆ ಅನ್ನುವ ಮಾಹಿತಿ, ಕಾಂಗ್ರೆಸ್ ಸರ್ಕಾರ ನೀಡುವ 5 ಗ್ಯಾರಂಟೀ ಯೋಜನೆಗಳ ಪ್ರತಿದಿನದ ಅಪ್ಡೇಟ್, ನೀವೇನಾದರೂ ಸರ್ಕಾರಿ ಹುದ್ದೆಗಳಿಗೆ ಹುಡುಕುತ್ತಿದ್ದರೆ ಪ್ರತಿದಿನ ಸರ್ಕಾರ ಕರೆಯುವ ಹೊಸ ಹುದ್ದೆಗಳ ಅಧಿ ಸೂಚನೆಯ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಹಲವು ವಿಷಯಗಳ ಜೊತೆಗೆ ಸ್ಕಾಲರ್ಶಿಪ್ ಗಳ ಮಾಹಿತಿ ನಮ್ಮ ಮಾಧ್ಯಮವು ಪ್ರತಿದಿನ ನಿಮಗೆ ಆದರಿಸುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಉಚಿತವಾಗಿ ತಕ್ಷಣ ಎಲ್ಲರಿಗೂ ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ತಪ್ಪದೆ ಸೇರಿಕೊಳ್ಳಿ.

ಸ್ನೇಹಿತರೆ ಮೇಲೆ ಹೇಳಿದಂತೆ ಈ ಯೋಜನೆಗೆ ಅರ್ಜಿ ಹಾಕುವ ಮೂಲಕ ಹಲವು ಬಡ ಕುಟುಂಬಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳ, ವಸತಿಗಳಿಲ್ಲದ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರು ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು. ಅದು ಯಾವ ಯೋಜನೆ ಎಂದರೆ ಪ್ರಧಾನಮಂತ್ರಿ ಆವಾಸ್ ಯೋಜನೆ (PM awas yojana). ಇದು ಕೇಂದ್ರ ಸರ್ಕಾರದ ಪ್ರಮುಖ ಯೋಜನಗಳಲ್ಲಿ ಒಂದಾಗಿದೆ.

 

(PM awas yojana) ಪ್ರಧಾನಮಂತ್ರಿ ಆವಾಸ್ ಯೋಜನೆ :

ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಮೊದಲು ಕಾಂಗ್ರೆಸ್ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಎಂಬ ಹೆಸರಿನಿಂದ ಮೊದಲು ದೇಶದಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯನ್ನು 2015 ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂಬ ಹೆಸರಿನಿಂದ ಮರುನಾಮಕರಣ ಮಾಡಿತು ಮತ್ತು ಈ ಯೋಜನೆಯನ್ನು ದೇಶದಲ್ಲಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಈ ಯೋಜನೆಗೆ ಹೊತ್ತು ನೀಡಿತು. ಈ ಯೋಜನೆಯ ಮೂಲಕ ಬಡ ಕುಟುಂಬಗಳು ಮನೆ ಕಟ್ಟಿಕೊಳ್ಳಲು ಸರಕಾರವು ಆರ್ಥಿಕ ನೆರವು ನೀಡುತ್ತದೆ.

ಸ್ನೇಹಿತರೆ, ನಾವು ಮೇಲೆ ಹೇಳಿದಂತೆ ಈ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ವಸತಿ ಇಲ್ಲದ ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬದ, ಹಿಂದುಳಿದ ವರ್ಗಗಳ, ವಸತಿ ವಂಚಿತರಾಗಿರುವ, ದೇಶದ ಹಲವು ವರ್ಗಗಳ ಬಡ ಕುಟುಂಬಗಳಿಗೆ ವಸತಿ ನಿರ್ಮಾಣ ಮಾಡಿಕೊಳ್ಳಲು ಸರ್ಕಾರವು ಸಬ್ಸಿಡಿಯ ಮೂಲಕ ಹಣವನ್ನು ನೀಡಿ, ಅವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕವಾಗಿ ಸಹಕರಿಸುತ್ತಿದೆ. ಈ ಯೋಜನೆಯು ದೇಶದಲ್ಲಿನ ಹಲವು ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಈಗಾಗಲೇ ಸಹಕರಿಸಿದ. ದೇಶದಲ್ಲಿ ಹಲವು ಬಡ ಕುಟುಂಬಗಳು ಈ ಯೋಜನೆಯಿಂದ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡಲು ಸ್ವಂತ ಮನೆಯನ್ನು ಹೊಂದಿವೆ.

PM awas yojane arji

(PM awas yojana) ಪಿಎಂ ಅವಾಸ್ ಯೋಜನೆಯ ಮೂಲಕ ಹಂಚಿಕೆಯಾದ ಮನೆಗಳ ವಿವರ :

ಸ್ನೇಹಿತರೆ 2015 ರಿಂದ ಈ ಯೋಜನೆಯನ್ನು ಮರುನಾಮಕರಣ ಮಾಡಿ ಯೋಜನೆಗೆ ಬಿಜೆಪಿ ಸರ್ಕಾರವು ಹೊತ್ತು ನೀಡಿದ ನಂತರ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಹಲವು ಕುಟುಂಬಗಳಿಗೆ ಮನೆಗಳನ್ನು ಹಂಚಿ, ಮನೆ ನಿರ್ಮಾಣ ಮಾಡಿಕೊಡಲಾಯಿತು. ನಮ್ಮ ರಾಜ್ಯದಲ್ಲಿ ಈ ಪ್ರಧಾನಮಂತ್ರಿ ಅವಾಸ್ ಯೋಜನೆಯ ಮೂಲಕ ನಿರ್ಮಾಣವಾದ ಮನೆಗಳ ವಿವರ ಈ ಕೆಳಗೆ ನೀಡಲಾಗಿದೆ.

ಸ್ನೇಹಿತರೆ ಈ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ನಮ್ಮ ರಾಜ್ಯದಲ್ಲಿ ಸುಮಾರು 7 ಲಕ್ಷದ ತನಕ ಮನೆಗಳನ್ನು ಮಂಜೂರು ಮಾಡಲಾಗಿದೆ. ಅಂದರೆ ಈ ಯೋಜನೆಯ 75% ಮನೆಗಳ ಹಂಚಿಕೆ ಇನ್ನು ಬಾಕಿ ಇದೆ. ಆದಕಾರಣ ತಕ್ಷಣ ಈ ಯೋಜನೆಗೆ ಅರ್ಜಿ ಹಾಕಿ ನೀವು ಕೂಡ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ಪಡೆದುಕೊಳ್ಳಬಹುದು. ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು? ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು? ಅರ್ಜಿ ಹಾಗೆ ಈ ಯೋಜನೆಯಿಂದ ಹೇಗೆ ಮನೆ ಕಟ್ಟಲು ಆರ್ಥಿಕ ನೆರವು  ಪಡೆದುಕೊಳ್ಳಬೇಕು ಅನ್ನುವ ಸಂಪೂರ್ಣ ಮಾಹಿತಿ ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ.

ಸರ್ಕಾರದಿಂದ ಈ ರೀತಿಯಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಹಲವು ಮನೆಗಳ ಮಂಜೂರು ಮಾಡಲಾಗಿದೆ. ಆದರೆ ಈ ಯೋಜನೆಯ ಬಗ್ಗೆ ದೇಶದಲ್ಲಿ ಇರುವ ಬಹಳಷ್ಟು ಜನರಿಗೆ ಗೊತ್ತಿಲ್ಲದೆ ಇರುವ ಕಾರಣ ಈ ಯೋಜನೆಯ 75% ಮನೆಗಳು ಹಂಚಿಕೆ ಬಾಕಿ ಉಳಿದಿದೆ. ಆದ್ದರಿಂದ ಈ ಯೋಜನೆಗೆ ನೀವೇನಾದರೂ ಅರ್ಜಿ ಹಾಕಿದರೆ ಖಂಡಿತ ಈ ಯೋಜನೆಯ ಲಾಭ ಪಡೆದು ಮನೆ ನಿರ್ಮಾಣ ಮಾಡಿಕೊಳ್ಳಬಹುದು.

(PM awas yojana) ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದ್ದೇಶವೇನು :

ಸ್ನೇಹಿತರೆ ಮೇಲೆ ಹೇಳಿದ ಹಾಗೆ ಕೇಂದ್ರ ಸರ್ಕಾರದ ಹಲವು ಜನರಿಗೆ ಆರ್ಥಿಕ ನೆರವು ನೀಡಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಯೋಜನೆಗಳಲ್ಲಿ ಈ ಪ್ರಧಾನಮಂತ್ರಿ ಆವಾಸ್ ಯೋಜನೆಯು ಒಂದು ಪ್ರಾಮುಖ್ಯ ಯೋಜನೆಯಾಗಿದೆ. ಈ ಯೋಜನೆ ದೇಶದಲ್ಲಿನ ಹಲವು ಬಡ ಕುಟುಂಬಗಳು ಆರ್ಥಿಕವಾಗಿ ನೆರವು ನೀಡಿದೆ. ಈ ಪ್ರಧಾನಮಂತ್ರಿ ಆವಾಸ ಯೋಜನೆ ಪ್ರಮುಖ ಉದ್ದೇಶವೇನೆಂದರೆ ಆರ್ಥಿಕವಾಗಿ ಹಿಂದುಳಿದ, ದೇಶದಲ್ಲಿನ ಬಡ ಕುಟುಂಬಗಳಿಗೆ, ವಸತಿ ಗಳಲ್ಲದೆ ವಂಚಿತರಾಗಿರುವ ವರ್ಗದ ಕುಟುಂಬಗಳಿಗೆ, ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ನೀಡಿ ಇಂತಹ ಕುಟುಂಬಗಳಿಗೆ ಸ್ವಂತ ಮನೆಯನ್ನು ಮಾಡಿಕೊಳ್ಳಲು ಆರ್ಥಿಕವಾಗಿ ಸಹಕರಿಸಬೇಕು ಎಂಬುದು ಆವಾಸ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಸ್ನೇಹಿತರೆ ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ 2015 ರಿಂದ ಇಲ್ಲಿಯ ತನಕ ಈ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಗ್ರಾಮೀಣ ಮತ್ತು ನಾಗರ ಪ್ರದೇಶಗಳಲ್ಲಿ ನಿರ್ಮಾಣ ಮಾಡಿದ ಒಟ್ಟು ಮನೆಗಳ ಸಂಖ್ಯೆ ಸುಮಾರು 2 ಕೋಟಿ ಎಂದಿದೆ. ಇದು ಒಂದು ಸರ್ಕಾರದ ಬಹುದೊಡ್ಡ ಹೆಜ್ಜೆ ಎಂದು ಹೇಳಬಹುದು. ಏಕೆಂದರೆ ದೇಶದಲ್ಲಿನ ಎರಡು ಕೋಟಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಟ್ಟು, ಅವರು ತಮ್ಮ ಸ್ವಂತ ವಸತಿಗೃಹದಲ್ಲಿ ಸಂತೋಷವಾಗಿ ಜೀವನ ನಡೆಸಲು ಸಹಾಯ ನೀಡಿದೆ. ಇದರ ಜೊತೆಗೆ ಈ ಯೋಚನೆಯ ಮೂಲಕ ಇನ್ನು ಹಲವು ಮನೆಗಳ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿರುವ ಈ ಯೋಜನೆಯ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ.

ಅದಲ್ಲದೆ ಹಿಂದಿನ ತಿಂಗಳಲ್ಲಿ ಮಂಡಿಸಲಾದ ದೇಶ ಮಧ್ಯಂತರ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಅವರು, ಈ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಈಗಾಗಲೇ ದೇಶದಲ್ಲಿ ಎರಡು ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಮತ್ತೆ ಇನ್ನು ಮುಂದಿನ ವರ್ಷದಲ್ಲಿ ಅಂದರೆ 2024 – 25 ನೆಯ ಸಾಲಿನಲ್ಲಿ ಸುಮಾರು 3 ಕೋಟಿ ಮನೆಗಳನ್ನು ನಿರ್ಮಾಣ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಈ ಒಂದು ಕಾರಣಕ್ಕಾಗಿ ನಾವು ನಿಮಗೆ ಹೇಳುತ್ತಿರುವುದೇನೆಂದರೆ ಈ ವರ್ಷ ಮೂರು ಕೋಟಿ ತನಕ ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶ ಸರ್ಕಾರ ಹೊಂದಿದ್ದು, ಈ ಯೋಜನೆಗೆ ನೀವೇನಾದರೂ ನೋಂದಣಿ ಮಾಡಿಕೊಂಡು ಅರ್ಜಿ ಹಾಕಿದರೆ ಖಂಡಿತ ಈ ಯೋಜನೆಯ ಮೂಲಕ ನೀವು ಮನೆಯನ್ನು ಪಡೆದುಕೊಳ್ಳಬಹುದು.

ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ 3 ಕೋಟಿ ಮನೆಗಳನ್ನು ದೇಶದಲ್ಲಿ ಬಡ ಕುಟುಂಬಗಳಿಗಾಗಿ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿರುವ ಕಾರಣ ಈ ಯೋಜನೆಗೆ ನೀವು ಕೂಡ ತಪ್ಪದೇ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಿರಿ. ನಿಮ್ಮ ಹತ್ತಿರದಲ್ಲಿನ ಬಡ ಕುಟುಂಬದ ಜನಗಳೆಂದರೆ ಅವರಿಗೂ ಈ ಯೋಜನೆ ಮಾಹಿತಿ ತಿಳಿಸಿ, ಯೋಜನೆಗೆ ಅರ್ಜಿ ಹಾಕಲು ತಿಳಿಸಿರಿ. ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PM awas yojana) ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳ ಬಗ್ಗೆ ಮತ್ತು ಅರ್ಜಿ ಹಾಕುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

 

ಪಿಎಂ ಅವಾಸ್ ಯೋಜನೆಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು :

ಸ್ನೇಹಿತರೆ ನೀವೇನಾದರೂ ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ಪಡೆಯಬೇಕಾದರೆ, ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

•ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಭಾರತದ ಪ್ರಜೆಯಾಗಿರಬೇಕು ಮತ್ತು 18 ವರ್ಷ ವಯಸ್ಸು ಮೇಲ್ಪಟ್ಟಿರಬೇಕು.

•ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕೆಳಗೆ ಇರಬೇಕು.

•ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಲು ನೀವು ನಿಮ್ಮ ರಾಜ್ಯದ ಆಹಾರ ಇಲಾಖೆ ನೀಡುವ ಪಡಿತರ ಚೀಟಿ (ರೇಷನ್ ಕಾರ್ಡ್) ಹೊಂದಿರಲೇ ಬೇಕು.

ಸೂಚನೆ : ಸ್ನೇಹಿತರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಅಂಗವಿಕಲರಿಗೆ, ಮಹಿಳೆಯರಿಗೆ ಮತ್ತು ವಿಧವೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಇಂತಹವರು ತಪ್ಪದೆ ಅರ್ಜಿ ಹಾಕಿ.

ಆವಾಸ್ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕೆ ನೀಡುವ ಹಣ ಎಷ್ಟು?

ಸ್ನೇಹಿತರೆ, ಮೇಲೆ ಹೇಳಿದ ಹಾಗೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಇದನ್ನು ತಿಳಿದುಕೊಂಡ ಮೇಲೆ ನಿಮಗೆ, ಈ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡಲು ಎಷ್ಟು ಹಣ ನೀಡಲಾಗುತ್ತದೆ ಎಂಬ ಪ್ರಶ್ನೆ ಬಂದಿರಬಹುದು ಅದಕ್ಕೆ ಇಲ್ಲಿ ಉತ್ತರ ನೀಡಲಾಗಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಕುಟುಂಬಗಳಿಗೆ ಬೇರೆಬೇರೆ ರೀತಿಯ ಹಣ ನೀಡಲಾಗುತ್ತದೆ ಆದರೆ ವಿವರ ಇಲ್ಲಿದೆ.

ಗ್ರಾಮೀಣ ಪ್ರದೇಶದ ಕುಟುಂಬಕ್ಕೆ : ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಕೇಂದ್ರ ಸರ್ಕಾರದಿಂದ ಸುಮಾರು 1,70,000 ರಿಂದ 2,00,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ನಗರ ಪ್ರದೇಶದ ಕುಟುಂಬಕ್ಕೆ : ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ನಗರ ಪ್ರದೇಶದಲ್ಲಿನ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು, ಕೇಂದ್ರ ಸರಕಾರದಿಂದ ಸುಮಾರು 2 ಲಕ್ಷದಿಂದ 2 ಲಕ್ಷದ 50 ಸಾವಿರದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ

ಪಿಎಂ ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಸ್ನೇಹಿತರೆ ನಿಮಗೆ ಸ್ವಂತ ಮನೆಗಳೆಲ್ಲವ ಮತ್ತು ನೀವು ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಲುಬಯಸುತ್ತೀರಾ? ಹಾಗಾದರೆ ಈ ಯೋಜನೆಗೆ ಅರ್ಜಿ ಹಾಕಲು ನೀವು ಈ ಕೆಳಗಿನ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಹೋಂಡಿರಲೇಬೇಕು.

•ಚಾಲ್ತಿಯಲ್ಲಿರುವ ಫೋನ್ ನಂಬರ್

•ಅರ್ಜಿ ಹಾಕುವವರ ಆಧಾರ್ ಕಾರ್ಡ್

•ಅರ್ಜಿ ಹಾಕುವವರ ಕುಟುಂಬದ ರೇಷನ್ ಕಾರ್ಡ್

•ಅರ್ಜಿ ಹಾಕುವವರ ವಾಸ ಸ್ಥಳ ಪ್ರಮಾಣ ಪತ್ರ

•ಅರ್ಜಿ ಹಾಕುವವರ ಬ್ಯಾಂಕ್ ಪಾಸ್ ಬುಕ್

•ಅರ್ಜಿ ಹಾಕುವವರ ಜಾತಿ ಪ್ರಮಾಣ ಪತ್ರ

•ಅರ್ಜಿ ಹಾಕುವ ಆದಾಯ ಪ್ರಮಾಣ ಪತ್ರ

ಈ ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ಮೊದಲು ರೆಡಿ ಮಾಡಿಕೊಂಡು ನಂತರ ಈ ಕೆಳಗೆ ನೀಡಿದ ಹಂತಗಳನ್ನು ಅನುಸರಿಸಿಕೊಂಡು ಸುಲಭವಾಗಿ ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ (PM awas yojana) ಅರ್ಜಿಯನ್ನು ಹಾಕಿ.

ಪಿಎಂ ಅವಾಸ್ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು?

ನಾವು ಮೇಲೆ ನೀಡಿರುವ ಪಿಎಂ ಆವಾಸ್ ಯೋಜನೆಯ ಅಧಿಕೃತ ಲಿಂಕ್ ಮೇಲೆ ಒತ್ತಿ ನೀವು ಮೊದಲು ಆವಾಸ್ ಯೋಜನೆಯಡಿ. ನಂತರ ಯೋಜನೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ದಾಖಲೆಗಳನ್ನು ಬಳಸಿ ರಿಜಿಸ್ಟರ್ ಮಾಡಿಕೊಂಡು, ಯೋಜನೆಗೆ ಅರ್ಜಿ ಹಾಕಲು ಕೇಳಲಾದ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.

ಸೂಚನೆ : ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾದರೆ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನಲ್ಲಿ ಭೇಟಿ ನೀಡಿ, ಸುಲಭವಾಗಿ ಅರ್ಜಿ ಸಲ್ಲಿಸಬಹುದು.

 

Leave a Comment

?>