PM awas yojana : ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು? ಕೊನೆಯ ದಿನಾಂಕ ಯಾವಾಗ?

PM awas yojana | ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು? ಕೊನೆಯ ದಿನಾಂಕ ಯಾವಾಗ?

PM awas yojana : ನಮಸ್ಕಾರ ಗೆಳೆಯರೇ, ನಮ್ಮ ಇವತ್ತಿನ ಹೊಸ ಲೇಖನಕ್ಕೆ ತಮಗೆ ಸ್ವಾಗತ. ಈ ಲೇಖನವು ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಗೆಳೆಯರೇ ಈ ವರ್ಷದ ಕೇಂದ್ರದ ಯೂನಿಯನ್ ಬಜೆಟ್ ಮಂಡನೆ ಮಾಡಲಾಗಿದ್ದು, ಬಜೆಟ್ ಅಲ್ಲಿ ಪಿಎಂ ಆವಾಸ್ ಯೋಜನೆಗೆ ಮಹತ್ವ ನೀಡಲಾಗಿದೆ. ಪಿಎಂ ಆವಾಸ್ ಯೋಜನೆಗೆ ಬಜೆಟ್ ಅನ್ನು ನಿಗದಿಪಡಿಸಿ ಮೀಸಲಿಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಈ ವರ್ಷ ಪಿಎಂ ಆವಾಸ್ ಯೋಜನೆಯ ಮೂಲಕ ದೇಶದಲ್ಲಿನ ಹಲವು ಬಡವರಿಗೆ ವಸತಿ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬಜೆಟ್ ನಲ್ಲಿ ತಿಳಿಸಿರುವ ಹಾಗೆ ಈ ವರ್ಷ ಒಂದು ಕೋಟಿ ಮನೆಗಳ ಹಂಚಿಕೆಯನ್ನು ಬಡವರಿಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಮೂಲಕ ಯಾರಿಗೆಲ್ಲ ಉಚಿತವಾಗಿ ವಸತಿ ನಿರ್ಮಾಣ ಮಾಡಿಕೊಡಲಾಗುವುದು ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಅದನ್ನು ನೋಡಿಕೊಂಡು ತಪ್ಪದೆ ಅರ್ಜಿ ಹಾಕಿ.

ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶವು ಮುಂದುವರೆಯುತ್ತಿರುವ ದೇಶಗಳ ಪಟ್ಟಿಯಲ್ಲಿರುವ ದೇಶವಾಗಿದೆ. ಆದಕಾರಣ ದೇಶದಲ್ಲಿ ಇನ್ನೂ ಹಲವು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸ್ವಂತ ವಸತಿ ಗೃಹ ಇಲ್ಲ. ಇಂತಹ ವಸತಿ ರಹಿತ ಬಡ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಿ ಅವರಿಗೆ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಅಕ್ಕಪಕ್ಕದಲ್ಲಿನ, ನಿಮಗೆ ಪರಿಚಯ ಇರುವ ಯಾವುದಾದರೂ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ವಸತಿ ಇಲ್ಲ ಅಂದರೆ ಅಂಥವರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಈ ಯೋಜನೆಗೆ ತಪ್ಪದೆ ಅರ್ಜಿಯನ್ನು ಹಾಕಿಸಿರಿ. ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಈ ಲೇಖನವನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಹೌದು ಸ್ನೇಹಿತರೆ, ಮೇಲೆ ಹೇಳಿದ ಹಾಗೆ ವಸತಿ ರಹಿತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ನೆರವು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಈಗಾಗಲೇ ದೇಶದಲ್ಲಿ ಹಲವು ಜನ ಮನೆಗಳ ನಿರ್ಮಾಣ ಮಾಡಿಕೊಂಡಿದ್ದು, ಈಗ ಮತ್ತೆ ಈ ಯೋಜನೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಈ ಬಾರಿ ಒಂದು ಕೋಟಿ ಮನೆಗಳ ಹಂಚಿಕೆ ಮಾಡುವ ನಿರ್ಧಾರ ಸರ್ಕಾರ ಹೊಂದಿದ್ದು, ದೇಶದಲ್ಲಿನ ಎಲ್ಲಾ ಅರ್ಜಿದಾರರಿಗೆ ಯೋಜನೆಯ ಲಾಭ ಸಿಗುವುದು ಖಚಿತವಾಗಿದೆ. ಅದಕ್ಕಾಗಿ ಈ ಅವಕಾಶವನ್ನು ಬಿಟ್ಟು ಕೊಡದೆ, ಕೆಳಗೆ ನೀಡಿರುವ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು ಮತ್ತು ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು ಎಂದು ನೋಡಿಕೊಂಡು ನಂತರ ಅರ್ಜಿ ಹಾಕುವ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.

ವಿಧ್ಯಾರ್ಥಿಗಳಿಗೆ 30,000 ವಿಧ್ಯಾರ್ಥಿ ವೇತನ , ಅರ್ಜಿ ಹಾಕಲು ಇಲ್ಲಿ ಒತ್ತಿ!

ನಮ್ಮ ಮಾಧ್ಯಮದಲ್ಲಿ ಪ್ರತಿ ದಿನ ಇದೆ ರೀತಿಯ ಬಡವರಿಗೆ ಸರ್ಕಾರ ನೀಡುವ ಯೋಜನೆಗಳ ಮಾಹಿತಿಯನ್ನು ನೀಡಲಾಗುತ್ತದೆ. ಇವತ್ತಿನ ಮಾಧ್ಯಮದಲ್ಲಿ ಪಿಎಂ ಆವಾಸ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಂತೆ ಪಿಎಂ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಉಜ್ವಲ್ ಯೋಜನೆ, ಇ- ಶ್ರಮ ಯೋಜನೆ, ಪಿಂಚಣಿ ಯೋಜನೆ ಬಗ್ಗೆ ಮಾಹಿತಿ ನೀಡುತ್ತೇವೆ. ರೇಷನ್ ಕಾರ್ಡ್ ಅರ್ಜಿ ಹಾಕುವ ದಿನಾಂಕ, ತಿದ್ದುಪಡಿ ಮಾಡುವ ದಿನಾಂಕ, ಕಾಂಗ್ರೆಸ್ ಗ್ಯಾರಂಟೀ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಮುಂತಾದವುಗಳ ಬಗ್ಗೆ ಮಾಹಿತಿ ನಿಮಗೆ ಪ್ರತಿ ದಿನ ಬೇಕಾದಲ್ಲಿ ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ.

ನಿಮಗೆ ಸರ್ಕಾರದ ಖಾಲಿ ಇರುವ ಹುದ್ದೆಗಳ ಬಗ್ಗೆ ಹೊರಡಿಸುವ ಅಧಿಸೂಚನೆಯ ಹುದ್ದೆಯ ವಿವರ, ವೇತನ, ಅರ್ಜಿ ಹಾಕುವ ವಿಷಯದ ಬಗ್ಗೆ ಮಾಹಿತಿ ಒದಗಿಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಸರ್ಕಾರದ ಸ್ಕಾಲರ್ಶಿಗಳ ಅರ್ಜಿಯ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಇದರ ಜೊತೆಗೆ ರೈತರಿಗೆ ನೀಡುವ ಪಿಎಮ್ ಕಿಸಾನ್ ಯೋಜನೆ, ರೈತಶ್ರೀ ಯೋಜನೆ, ಬೆಳೆ ಪರಿಹಾರ ಯೋಜನೆ, ಬೆಳೆ ಸಾಲ ಮನ್ನಾ ಯೋಜನೆ, ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.

 

(PM awas yojana) ಪ್ರಧಾನ ಮಂತ್ರಿ ಆವಾಸ್ ಯೋಜನೆ :

ಸ್ನೇಹಿತರೆ, ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಮೊದಲು ರಾಜೀವ್ ಗಾಂಧಿ ವಸತಿ ಯೋಜನೆ ಎಂದು 1985 ರಲ್ಲಿ ಜಾರಿಗೆ ತರಲಾಗಿತ್ತು. ನಂತರ ಈ ಯೋಜನೆಯನ್ನು 2016ರಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಮರು ನಾಮಕರಣ ಮಾಡಿತು ಮತ್ತು ಈ ಯೋಜನೆಯ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡಲಾಯಿತು.

ಸ್ನೇಹಿತರೆ ನಮ್ಮ ದೇಶದಲ್ಲಿ ಇಷ್ಟೊಂದು ಅಭಿವೃದ್ಧಿ ಆದರೂ ಕೆಲವು ಹಳ್ಳಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳು ಇನ್ನೂ ಜೋಪಡಿಗಳಲ್ಲಿ ಜೀವನವನ್ನು ನಡೆಸುತ್ತಿದೆ. ಇಂತಹ ಕುಟುಂಬಗಳಿಗೆ ಮಳೆಗಾಲದಲ್ಲಿ ತುಂಬಾ ಸಂಕಷ್ಟಗಳು ಎದುರಾಗುತ್ತವೆ. ಇದನ್ನು ಗಮನಿಸಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಮೂಲಕ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವನ್ನು ನೀಡುತ್ತದೆ. ನೀವು ಕೂಡ ಯೋಜನೆಗೆ ಅರ್ಜಿ ಹಾಕಲು ಬಯಸಿದರೆ ಕೆಳಗೆ ಅರ್ಜಿ ಹಾಕುವ ವಿಧಾನವನ್ನು ನೀಡಲಾಗಿದೆ ಅದನ್ನು ಪೂರ್ತಿ ಓದಿ.

ನಮಗೆ ಗೊತ್ತಿರುವ ಹಾಗೆ ದೇಶದಲ್ಲಿನ ಹಿಂದುಳಿದ ವರ್ಗದ ಮತ್ತು ಮಧ್ಯಮ ವರ್ಗದ ಕೆಲವು ಕೂಲಿ ಕಾರ್ಮಿಕರಿಗೆ, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ, ರೈತರಿಗೆ ಇನ್ನು ಸ್ವಂತ ಮನೆಗಳಿಲ್ಲದೆ ಕೆಲವು ಜನ ಬಾಡಿಗೆ ಮನೆಯಲ್ಲಿದ್ದರೆ ಮತ್ತೆ ಕೆಲವು ಜನ ಜೋಪಡಿಗಳಲ್ಲಿ ಇದ್ದಾರೆ. ಇಂತಹ ಕುಟುಂಬಗಳಿಗೆ ಸಣ್ಣ ಪುಟ್ಟ ಮಕ್ಕಳನ್ನು ತೆಗೆದುಕೊಂಡು ಇಂತಹ ಜೋಪಡಿಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಕುಟುಂಬಗಳಿಗೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು ತಪ್ಪದೇ ಅರ್ಜಿ ಹಾಕಿ, ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಆರ್ಥಿಕ ನೆರವು ಪಡೆಯಬಹುದು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿದ್ದಲಾಗಿದೆ ಅದನ್ನು ಪೂರ್ತಿ ಓದಿ.

PM awas yojana

(PM awas yojana) ಪಿಎಂ ಆವಾಸ್ ಯೋಜನೆ ಪಟ್ಟಿ :

ಗೆಳೆಯರೇ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ಪ್ರಕಾರದ ಯೋಜನೆಗಳನ್ನು ಮಾಡಲಾಗಿದೆ. ಒಂದು ಗ್ರಾಮೀಣ ಪಟ್ಟಿ ಇದರಲ್ಲಿ ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳು ಒಳಪಡುತ್ತವೆ ಮತ್ತೊಂದು ನಗರ ಪಟ್ಟಿ ಇದರಲ್ಲಿ ನಗರಗಳಲ್ಲಿನ ಕುಟುಂಬಗಳು ಒಳಪಡುತ್ತವೆ. ನೀವು ಯಾವ ವಿಭಾಗಕ್ಕೆ ಒಳಪಡುತ್ತಿರೋ ಅದೇ ವಿಭಾಗದಲ್ಲಿ ಅರ್ಜಿಯನ್ನು ಸಲ್ಲಿಸಿ.

ಗ್ರಾಮೀಣ ಪಟ್ಟಿ : ಸ್ನೇಹಿತರೆ ದೇಶದಲ್ಲಿ ಗ್ರಾಮೀಣ ಭಾಗದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಕೂಲಿಕಾರ್ಮಿಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳು ಸ್ವಂತ ಮನೆಗಳಿಲ್ಲದೆ ತುಂಬಾ ಕಷ್ಟದ ಜೀವನ ನಡೆಸುತ್ತಿದ್ದಾರೆ ಇಂಥವರು ಈ ಗ್ರಾಮೀಣ ವಿಭಾಗದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು. ಗ್ರಾಮೀಣ ವಿಭಾಗದ ಅರ್ಜಿದಾರರಿಗೆ ನೀಡುವ ಯೋಜನೆ ಲಾಭಗಳು ಇಲ್ಲಿದೆ.

•ಈ ಗ್ರಾಮೀಣ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಜಿದಾರರಿಗೆ, ಈ ಯೋಜನೆಯ ಮೂಲಕ 1,50,000 ರಿಂದ 1,70,000 ವರೆಗೆ ಆರ್ಥಿಕ ನೆರವಿನ ಹಣವನ್ನು ನೀಡಲಾಗುತ್ತದೆ.

 

ನಗರ ಪಟ್ಟಿ : ಸ್ನೇಹಿತರೆ ನಮ್ಮ ದೇಶದಲ್ಲಿ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ಕೂಡ ಇನ್ನೂ ಹಲವು ಕೂಲಿ ಕಾರ್ಮಿಕರು ವಸತಿ ವಂಚಿತರಾಗಿದ್ದಾರೆ. ಇಂತಹ ನಗರ ಪ್ರದೇಶದಲ್ಲಿರುವ ಮನೆಗಳೆಲ್ಲದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಈ ಪಿಎಂ ಅವಾಸ್ ಯೋಜನೆಗೆ ಈ ನಗರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು. ನಗರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದವರೆಗೆ ಈ ಲಾಭಗಳು ಸಿಗುತ್ತವೆ.

•ನಗರ ಪ್ರದೇಶದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ಈ ಯೋಜನೆಗೆ ಅರ್ಜಿ ಹಾಕಿ ಆಯ್ಕೆಯಾದರೆ ಅವರಿಗೆ ಸುಮಾರು 2,50,000 ಸಬ್ಸಿಡಿ ಹಣದ ನೆರವನ್ನು ಸರ್ಕಾರ ನೀಡುತ್ತದೆ.

 

ಪಿಎಂ ಆವಾಸ್ ಯೋಜನೆ ಅರ್ಜಿ ಹಾಕಲು ಅರ್ಹತೆಗಳು :

ಗೆಳೆಯರೇ ನೀವೇನಾದರೂ ಪಿಎಂ ಆವಾಸ್ ಯೋಜನೆಗೆ ಅರ್ಜಿ ಹಾಕಲು ಬಯಸಿದರೆ, ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.

•ಪಿಎಂ ಅವಾಸ್ ಯೋಜನೆಗೆ ಅರ್ಜಿ ಹಾಕುವ ಅರ್ಜಿದಾರ ಭಾರತದವರಾಗಿದ್ದು, 18 ವರ್ಷ ವಯಸ್ಸು ಮೇಲ್ಪಟ್ಟಿರಬೇಕು.

•ಅರ್ಜಿ ಹಾಕಲು ಬಯಸುವ ಅರ್ಜಿದಾರ ತಮ್ಮ ರಾಜ್ಯದ ಆಹಾರ ಇಲಾಖೆ ನೀಡುವ ರೇಷನ್ ಕಾರ್ಡ್ ಹೊಂದಿರಬೇಕು.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 2,50,000 ಕೆಳಗೆ ಇರಬೇಕು.

ಸೂಚನೆ : ಈ ಯೋಜನೆಯಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು ಇಂತವರು ತಪ್ಪದೆ ಅರ್ಜಿ ಹಾಕಿರಿ.

 

ಆವಾಸ್ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :

ಗೆಳೆಯರೇ ಈ ಯೋಜನೆಗೆ ಅರ್ಜಿ ಹಾಕಲು ಬಯಸುವ ಅರ್ಜಿದಾರರು ಮೇಲೆ ನೀಡಿರುವ ಅರ್ಹತೆಗಳೊಂದಿಗೆ ಈ ಎಲ್ಲಾ ದಾಖಲೆಗಳನ್ನು ಕೂಡ ಕಡ್ಡಾಯವಾಗಿ ಹೊಂದಿರಬೇಕು. ಅವುಗಳು ಇಲ್ಲಿವೆ.

  • ಫೋನ್ ನಂಬರ್
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಅರ್ಜಿದಾರರ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಾಸಸ್ಥಳ ಪ್ರಮಾಣ ಪತ್ರ

 

ಪಿಎಂ ಆವಾಸ್ ಯೋಜನೆ ಅರ್ಜಿ ಹಾಕುವ ವಿಧಾನ :

ಸ್ನೇಹಿತರೆ ನಾವು ಮೇಲೆ ಹೇಳಿದ ಹಾಗೆ ಈ ವರ್ಷ ಬಿಜೆಪಿ ಸರ್ಕಾರವು ಪಿಎಂ ಆವಾಸ್ ಯೋಜನೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಈ ಸಲದ ಯೂನಿಯನ್ ಬಜೆಟ್ ಅಲ್ಲಿ ತಿಳಿಸಿರುವ ಹಾಗೆ ಈ ವರ್ಷ ಒಂದು ಕೋಟಿ ಮನೆಗಳನ್ನು ಈ ಯೋಚನೆಯ ಮೂಲಕ ನಿರ್ಮಿಸಲಾಗುತ್ತದೆ ಮತ್ತು ಅದಕ್ಕೆ ಬೇಕಾಗುವ ಹಣವನ್ನು ಈಗಾಗಲೇ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ. ಅದಕ್ಕಾಗಿ ಈ ಯೋಜನೆಗೆ ತಪ್ಪದೇ ಅರ್ಜಿ ಹಾಕಿರಿ. ಈ ಪಿಎಂ ಅವಾಸ್ ಯೋಜನೆಗೆ ಅರ್ಜಿ ಹಾಕಲು ಈ ಕೆಳಗಿನ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

                ಅರ್ಜಿ ಹಾಕಲು ಇಲ್ಲಿ ಒತ್ತಿ.

•ನಗರ ಪ್ರದೇಶದ ಅರ್ಜಿದಾರರು https://pmayg.nic.in/netiayHome/home.aspx

•ಗ್ರಾಮೀಣ ಪ್ರದೇಶದ ಅರ್ಜಿದರು https://pmaymis.gov.in/

 

ಮೇಲೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಸೇರುವ ವಿಭಾಗದಲ್ಲಿ, ನಿಮ್ಮ ಎಲ್ಲಾ ದಾಖಲೆಗಳ ಮಾಹಿತಿಯನ್ನು ಭರ್ತಿ ಮಾಡಿ ಯೋಜನೆಯ ಅರ್ಜಿಯನ್ನು ಪೂರ್ತಿ ಗೊಳಿಸಿರಿ.

ಸ್ನೇಹಿತರೆ ಈ ಲೇಖನದ ಮೂಲಕ ಪಿಎಂ ಅವಾಸ್ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು, ಅದಕ್ಕೆ ಬೇಕಾಗುವ ದಾಖಲಾತಿ ಹಾಗೂ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿದ್ದೇನೆ ಎಂದು ಭಾವಿಸುತ್ತೇನೆ. ಧನ್ಯವಾದಗಳು.

Leave a Comment

?>