LPG gas cylinder subsidy : ನಮಸ್ಕಾರ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ಕರ್ನಾಟಕದ ಜನತೆಗೆ. ಗೆಳೆಯರೇ ನೀವೇನಾದರೂ ಹೊಸ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯಬೇಕು ಎಂದು ಅಥವಾ ಈಗಾಗಲೇ ಕನೆಕ್ಷನ್ ಪಡೆದು ಅತಿ ಹೆಚ್ಚಿನ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ತುಂಬಿಸಲು ಪ್ರತಿ ತಿಂಗಳು ಕಸ್ತವಾಗಿದೆಯಾ? ಹಾಗಾದರೆ ಈ ನಮ್ಮ ಲೇಖನವನ್ನು ತಪ್ಪದೆ ನೋಡಿ. ನೀವು ಕೇಂದ್ರ ಸರ್ಕಾರದ ಈ ಒಂದು ಯೋಜನೆಗೆ ಅರ್ಜಿ ಹಾಕಿ ಹೇಗೆ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳಬೇಕು ಮತ್ತು ಹೊಸ ಗ್ಯಾಸ್ ಸಿಲಿಂಡರ್ ಪಡೆಯಬೇಕು ಅನ್ನುವ ಮಾಹಿತಿ ನೀಡುತ್ತೇವೆ. ಇದು ಯಾವ ಯೋಜನೆ, ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು, ಅರ್ಜಿ ಹಾಕಲು ಅರ್ಹತೆಗಳೇನು ಎಂಬ ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಈ ಒಂದು ಯೋಜನೆಗೆ ಅರ್ಜಿ ಹಾಕಿ ನೀವು ಉಚಿತವಾಗಿ ಗ್ಯಾಸ್ ಗ್ಯಾಸ್ ಸಿಲಿಂಡರ್ ಪಡೆಯುವುದಲ್ಲದೆ, ಪ್ರತಿ ತಿಂಗಳು ಅತಿ ಕಡಿಮೆ ಬೆಲೆಯಲ್ಲಿ ಈ ಯೋಜನೆಯ ಮೂಲಕ ನೀಡುವ ಸಬ್ಸಿಡಿ ಬಳಸಿಕೊಂಡು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳಬಹುದು. ಅದ್ದರಿಂದ ಈ ಒಂದು ಅವಕಾಶವನ್ನು ಬಿಡದೆ ಬೇಗ ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಿರಿ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಹಾಕುವ ಮೊದಲು ಈ ಎಲ್ಲಾ ವಿಷಯವನ್ನು ತಿಳಿದುಕೊಳ್ಳಿ.
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರಸ್ತುತ ಸಮಯದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಅನ್ನು ಬಳಸಿಕೊಂಡೇ ಅಡುಗೆಯನ್ನು ಮಾಡುತ್ತಾರೆ. ಆದ ಕಾರಣ ಗ್ಯಾಸ್ ಸಿಲಿಂಡರ್ ನ ಬೆಲೆ ಆಕಾಶಕ್ಕೆ ಏರಿದೆ. ಇದರಿಂದ ಕೆಲವೊಂದು ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಲು ಕಷ್ಟವಾಗಿದೆ. ಆದರೆ ಇದು ಅನಿವಾರ್ಯವಾದ ಕಾರಣ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಲು ಸಾಲ ಮಾಡಬೇಕಾಗುತ್ತಿದೆ. ಇದನ್ನು ಗಮನಿಸಿ ಕೇಂದ್ರ ಸರ್ಕಾರವು ಉಜ್ವಲ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನೀವು ಮೇಲೆ ಹೇಳಿದ ಎಲ್ಲ ಲಾಭವನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.
ದಿಶಾ ಸ್ಕಾಲರ್ಷಿಪ್ ಯೋಜನೆ ಅರ್ಜಿ ಹಾಕಿ , ಇಲ್ಲಿದೆ ಮಾಹಿತಿ!
ಸ್ನೇಹಿತರೆ ನಿಮಗೆ ನಾವು ಪ್ರತಿ ದಿನ ಇದೆ ರೀತಿಯ ಹೊಸ, ಉಪಯುಕ್ತ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆದ ಕಾರಣ ನಿಮಗೆ ಈ ವಿಷಯಗಳ ಮಾಹಿತಿ ಬೇಕಾದಲ್ಲಿ ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ. ನಮ್ಮ ಮಾಧ್ಯಮದಲ್ಲಿ ಗ್ಯಾಸ್ ಸಿಲಿಂಡರ್ ನ ಪ್ರತಿ ತಿಂಗಳ ಬೆಲೆಯ ಬಗ್ಗೆ ಮಾಹಿತಿ, ಪಿಎಂ ಆವಾಸ್ ಯೋಜನೆ ಬಗ್ಗೆ ಮಾಹಿತಿ, ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ, ಕಾಂಗ್ರೆಸ್ ಗ್ಯಾರಂಟೀ ಯೋಜನೆಗಳಾದ ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆಯ, ಯುವನಿಧಿ ಯೋಜನೆ, ಈ ಯೋಜನೆಗಳ ಬಗ್ಗೆ ಮಾಹಿತಿ, ಈ ಯೋಜನೆಗಳಿಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು, ಈ ಎಲ್ಲಾ ಯೋಜನೆಗಳ ಲಾಭ ಹೇಗೆ ಪಡೆಯಬೇಕು ಅನ್ನುವ ಮಾಹಿತಿ ಕುರಿತು ವಿವರಿಸಲಾಗುತ್ತದೆ. ಅದಕ್ಕಾಗಿ ನಿಮಗೆ ಈ ಎಲ್ಲಾ ಮಾಹಿತಿಗಳು ಬೇಕಾದರೆ ನಮ್ಮ ಮಾಧ್ಯಮಕ್ಕೆ ಪ್ರತಿ ದಿನ ಭೇಟಿ ನೀಡಿ ಮತ್ತು ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ.

ಇದರ ಜೊತೆಗೆ ಹೊಸ ಹುದ್ದೆಗಳಿಗೆ ಸರ್ಕಾರವು ಹೊರಡಿಸುವ ಅಧಿಸೂಚನೆಯಲ್ಲಿನ ಹುದ್ದೆಯ ವಿವರ, ಹುದ್ದೆಯ ಅರ್ಹತೆ, ಹುದ್ದೆಯ ಸಂಬಳ, ಹುದ್ದೆಗೆ ಅರ್ಜಿ ಹಾಕುವ ಮಾಹಿತಿ ನೀಡುತ್ತೇವೆ. ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ನೀಡುವ ವಿಧ್ಯಾರ್ಥಿ ವೇತನದ (scholarship) ಕುರಿತು ಮಾಹಿತಿ ನೀಡುತ್ತೇವೆ. ನಿಮಗೆ ರೈತರಿಗೆ ಸಂಬಂಧ ಪಟ್ಟ ಪಿಎಂ ಕಿಸಾನ್ ಯೋಜನೆ, ರೈತ ಸಿರಿ ಯೋಜನೆ, ಬೆಳೆ ಪರಿಹಾರ ಯೋಜನೆ, ಕೃಷಿ ಸಾಲ ಮನ್ನಾ ಯೋಜನೆ, ಬೆಳೆ ವಿಮೆ ನೋಂದಣಿಯ ಯೋಜನೆ, ಜೊತೆಗೆ ರೈತರು ಸರ್ಕಾರದಿಂದ ಯಾವ ರೀತಿ ಸಬ್ಸಿಡಿ ಅಲ್ಲಿ ಉಳುಮೆ ಉಪಕರಣಗಳು, ರಸಗೊಬ್ಬರ, ಬೀಜ, ಪಡೆಯಬಹುದು ಅನ್ನುವ ವಿಷಯದ ಕುರಿತು ಮಾಹಿತಿ ನಮ್ಮ ಮಾಧ್ಯಮವು ನೀಡುತ್ತದೆ. ನಿಮಗೆ ಈ ಎಲ್ಲಾ ಮಾಹಿತಿಗಳು ಬೇಕಾದರೆ ನಮ್ಮ WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿರಿ.
(LPG gas cylinder subsidy) ಉಜ್ವಲ್ ಯೋಜನೆಯ ವಿವರ :
ಸ್ನೇಹಿತರೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿಗೆ ಆಗುತ್ತಿರುವ ಕಷ್ಟಗಳನ್ನು ಗಮನಿಸಿ ಕೇಂದ್ರ ಸರ್ಕಾರವು 2016 ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಪ್ರಧಾನಿ ಆಗಿದ್ದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉಜ್ವಲ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯು ಹಲವು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಈ ಯೋಜನೆಯ ಮೂಲಕ ಹಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಬ್ಸಿಡಿ ಅಲ್ಲಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುತ್ತಿವೆ. ಈ ಯೋಜನೆಗೆ ಅರ್ಜಿ ಹಾಕಲು ಇನ್ನು ಅವಕಾಶವಿದ್ದು, ಈ ಯೋಜನೆಗೆ ಅರ್ಜಿ ಹಾಕಲು ಬೇಕಾದ ಅರ್ಹತೆಗಳು, ಮಾಹಿತಿ ಇಲ್ಲಿದೆ. ಅದನ್ನು ನೋಡಿಕೊಂಡು ತಪ್ಪದೆ ಅರ್ಜಿ ಸಲ್ಲಿಸಿ.
ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿನ, ಕಾಡು ಗುಡ್ಡಗಳಲ್ಲಿನ, ಕರಾವಳಿಯ ಪ್ರದೇಶದ ಮಹಿಳೆಯರು ಕಟ್ಟಿಗೆಯನ್ನು ಹೊತ್ತು ತಂದು ಅಡುಗೆ ಮಾಡಲು ಬಳಸುತ್ತಿದ್ದರು. ಈ ಕಟ್ಟಿಗೆಯನ್ನು ಕಷ್ಟ ಪಟ್ಟು ಹುಡುಕಿ ತಂದರು ಮಹಿಳೆಯರಿಗೆ ಅದರಿಂದ ಅಡುಗೆ ಮಾಡುವುದು ಬಹಳ ಕಷ್ಟವಾಗುತ್ತಿತ್ತು. ಅವರಿಗೆ ಮಳೆಗಾಲದಲ್ಲಿ ಕಟ್ಟಿಗೆ ಸಿಗುತ್ತಿರಲಿಲ್ಲ, ಕಟ್ಟಿಗೆಯಿಂದ ಬರುವ ಹೊಗೆ ಅವರ ಆರೋಗ್ಯವನ್ನು ಹಾಲು ಮಾಡುತ್ತಿತ್ತು. ಇದರಿಂದಾಗಿ ಸರ್ಕಾರವು ಮಹಿಳೆಯರಿಗೆ ಈ ಕಷ್ಟದಿಂದ ಪಾರು ಮಾಡಬೇಕು, ಅವರಿಗೆ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಅನ್ನು ಒದಗಿಸುವಂತೆ ಮಾಡಬೇಕು ಅನ್ನುವ ಉದ್ದೇಶಕ್ಕಾಗಿ, ಈ ಉಜ್ವಲ್ ಯೋಜನೆಯನ್ನು ಜಾರಿಗೆ ತರಲಾಯಿತು.
ಈ ಯೋಜನೆಯ ಮೂಲಕ ಪ್ರತಿಯೊಂದು ಮನೆಗೂ ಗ್ಯಾಸ್ ಸಿಲಿಂಡರ್ ಅನ್ನು ತಲುಪಿಸಬೇಕು ಅನ್ನುವುದು ಸರ್ಕಾರದ ಉದ್ದೇಶವಾಗಿತ್ತು. ಅದರಂತೆ ಈ ಯೋಜನೆಯ ಮೂಲಕ ದೇಶದಲ್ಲಿ ಸುಮಾರು 10 ಮಿಲಿಯನ್ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುವುದರ ಜೊತೆಗೆ, ಅವರಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿದಾಗ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿತು. ಅದರಂತೆಯೆ ಇನ್ನು ಈ ಯೋಜನೆಯ ಮೂಲಕ ಈ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತಿದೆ. ಈ ಸಲ ಮತ್ತೆ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಲುವಾಗಿ ಈ ಉಜ್ವಲ್ ಯೋಜನೆಯನ್ನು ಇನ್ನು ವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ. ಆದ ಕಾರಣ ತಕ್ಷಣ ಈ ಯೋಜನೆಗೆ ಅರ್ಜಿ ಹಾಕಿ, ಯೋಜನೆಯಿಂದ ನೀಡುವ ಲಾಭ ಪಡೆಯಿರಿ.
(LPG gas cylinder subsidy) ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಹತೆಗಳೇನು?
ಸ್ನೇಹಿತರೆ ಉಜ್ವಲ್ ಯೋಜನೆಯನ್ನು ದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಜಾರಿಗೆ ತರಲಾಗಿದೆ. ಇದೆ ಕಾರಣಕ್ಕಾಗಿ ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಲು ಪಡೆಯಲು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಅವುಗಳನ್ನು ಕೆಳಗೆ ನೀಡಲಾಗಿದೆ.
•ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕುವ ಮಹಿಳೆಯು 18 ವರ್ಷ ವಯಸ್ಸು ಮೆಲ್ಪಟ್ಟಿರಬೇಕು.
•ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.
•ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯು, ಈ ಹಿಂದೆ ಸರ್ಕಾರದಿಂದ ಈ ರೀತಿಯ ಯಾವುದೇ ಗ್ಯಾಸ್ ಸಿಲಿಂಡರ್ ಗೆ ಸಂಬಂದ ಪಟ್ಟ ಯೋಜನೆಯ ಲಾಭ ಪಡೆದಿರಬರಡು.
(LPG gas cylinder subsidy) ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
ಸ್ನೇಹಿತರೆ ನೀವು ಮೇಲಿನ ಎಲ್ಲ ಅರ್ಹತೆಗಳನ್ನು ಹೊಂದಿದ್ದು, ಈ ಉಜ್ವಲ್ ಯೋಜನೆಗೆ ಅರ್ಜಿ ಹಾಕಬೇಕು ಎಂದು ಆಸಕ್ತಿ ಇದ್ದರೆ ಈ ಕೆಳಗೆ ನೀಡಿದ ಕೆಲವು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅವುಗಳು ಯಾವುವು ಎಂಬುದು ಇಲ್ಲಿ ನೀಡಲಾಗಿದೆ.
ಆಧಾರ್ ಕಾರ್ಡ್ : ಅರ್ಜಿ ಹಾಕಲು ಬಯಸುವ ಮಹಿಳೆಯ ಆಧಾರ್ ಕಾರ್ಡ್ ಬೇಕಾಗುತ್ತದೆ. ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಆಗಿರಲೇ ಬೇಕು.
ರೇಷನ್ ಕಾರ್ಡ್ : ಅರ್ಜಿ ಹಾಕಲು ಬಯಸುವ ಮಹಿಳೆ ಇರುವ ಕುಟುಂಬದ ರೇಷನ್ ಕಾರ್ಡ್ ಬೇಕಾಗುತ್ತದೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ಅರ್ಜಿ ಹಾಕುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯದ ಮಾಹಿತಿಗಾಗಿ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
ಬ್ಯಾಂಕ್ ಪಾಸ್ಬೂಕ್ : ಅರ್ಜಿ ಹಾಕುವ ಮಹಿಳೆಯ ಬ್ಯಾಂಕ್ ಖಾತೆ ಬೇಕಾಗುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ KYC ಕಡ್ಡಾಯವಾಗಿ ಮಾಡಿಸಿರಬೇಕು. ಇದೆ ಬ್ಯಾಂಕ್ ಖತೆಯೇ ಮೂಲಕ ನಿಮಗೆ ಸಬ್ಸಿಡಿ ಹಣ ನೀಡಲಾಗುತ್ತದೆ.
ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುವುದು ಹೇಗೆ?
ಸ್ನೇಹಿತರೆ ನೀವು ಅತಿ ಹೆಚ್ಚಿನ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡುತ್ತಿದ್ದೀರಾ? ಇದರಿಂದ ನಿಮಗೆ ಕಷ್ಟವಾಗಿದೆ ಅಂದರೆ ನೀವು ಈ ಉಜ್ವಲ್ ಯೋಜನೆಗೆ ಅರ್ಜಿ ಹಾಕಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳಬಹುದು. ಅದು ಹೇಗೆ ಅಂದರೆ, ನೀವೇನಾದರೂ ಈ ಯೋಜನೆಗೆ ಅರ್ಜಿ ಹಾಕಿದರೆ ನಿಮಗೆ ಸರ್ಕಾರದಿಂದ ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ತುಂಬಿದಾಗ ₹300 ರೂಪಾಯಿಯ ಸಬ್ಸಿಡಿ ಹಣ ನೀಡಲಾಗುತ್ತದೆ. ಈಗಿರುವ ಗ್ಯಾಸ್ ಸಿಲಿಂಡರ್ ನ ಬೆಲೆ ₹800 ಅಂದರೆ ಸಬ್ಸಿಡಿ ಹಣ ತೆಗೆದರೆ ಕೇವಲ ₹500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಅದ್ದರಿಂದ ಎಲ್ಲರೂ ತಪ್ಪದೆ ಈ ಯೋಜನೆಗೆ ಅರ್ಜಿ ಹಾಕಿ, ಯೋಜನೆಯ ಲಾಭ ಪಡೆಯಿರಿ. ಯೋಜನೆಗೆ ಅರ್ಜಿ ಹಾಕುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಗ್ಯಾಸ್ ಸಿಲಿಂಡರ್ ಯೋಜನೆಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ ನೀವೇನಾದರೂ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದ್ದು, ಅರ್ಜಿ ಹಾಕಲು ಬೇಕಾಗುವ ಎಲ್ಲ ದಾಖಲೆಗಳನ್ನು ಕೂಡ ಹೊಂದಿದ್ದರೆ ಇಲ್ಲಿ ನೀಡಿರುವ ಉಜ್ವಲ್ ಯೋಜನೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಬಹುದು.
https://www.pmuy.gov.in/ujjwala2.html
ಮೇಲೆ ನೀಡಿದ ಲಿಂಕ್ ಮೇಲೆ ಒತ್ತಿ, ನಿಮಗೆ ಬೇಕಾದ ಏಜೆನ್ಸಿ ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಲಾಗುವ ನಿಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಪೂರ್ತಿ ಮಾಡಿರಿ.
ಉಜ್ವಲ ಯೋಜನೆಗೆ ಅರ್ಜಿ ಹಾಕುವ ಮೂಲಕ ಹೇಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ಹೇಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು ಅನ್ನುವ ಮಾಹಿತಿ ಈ ಲೇಖನದ ಮೂಲಕ ನಿಮಗೆ ನೀಡಿದ್ದೇನೆ ಎಂದು ಭಾವಿಸುತ್ತೇನೆ.
ಹೊಸ ಹುದ್ದೆಗಳಿಗೆ ಸರ್ಕಾರವು ಹೊರಡಿಸುವ ಅಧಿಸೂಚನೆಯಲ್ಲಿನ ಹುದ್ದೆಯ ವಿವರ, ಹುದ್ದೆಯ ಅರ್ಹತೆ, ಹುದ್ದೆಯ ಸಂಬಳ, ಹುದ್ದೆಗೆ ಅರ್ಜಿ ಹಾಕುವ ಮಾಹಿತಿ ನೀಡುತ್ತೇವೆ. ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ನೀಡುವ ವಿಧ್ಯಾರ್ಥಿ ವೇತನದ (scholarship) ಕುರಿತು ಮಾಹಿತಿ ನೀಡುತ್ತೇವೆ.ನಿಮಗೆ ಈ ಎಲ್ಲಾ ಮಾಹಿತಿಗಳು ಬೇಕಾದರೆ ನಮ್ಮ WhatsApp group ಮತ್ತು Telegram group ಜಾಯಿನ್ ಮಾಡಿಕೊಳ್ಳಿರಿ.